ರಾಮಗೊಂಡನಹಳ್ಳಿಯಲ್ಲಿ ಕೆ.ಸಿ ವ್ಯಾಲಿ ಯೋಜನೆಯ ಕಾಮಗಾರಿಯಿಂದ ಸಂಕಷ್ಟಕ್ಕೆ ಒಳಗಾದ ರೈತರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದೆ.

ಈ ಸಂದರ್ಭದಲ್ಲಿ ರೈತರು ಅವರ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಸಲು ವಿರೋಧ ವ್ಯಕ್ತಪಡಿಸಿದರು. ಕೆರೆಯ ಅಂಗಳದಲ್ಲಿ ಕಂಬಗಳನ್ನು ಹಾಕಿ ಪೈಪ್ ಲೈನ್ ಅಳವಡಿಸಲು ಪ್ರಯತ್ನ ನಡೆಯುತ್ತಿದೆ. ಅವರ ಸಮಸ್ಯೆಗಳನ್ನು ಆಲಿಸಿ, ಮತ್ತು ಎಲ್ಲರೊಂದಿಗೆ ಚರ್ಚಿಸಿ ಅವರಿಗೆ ಧೈರ್ಯ ತುಂಬಲಾಯಿತು.

ನನ್ನ ಕ್ಷೇತ್ರದ ರೈತರಿಗೆ ತೊಂದರೆಯಾಗಲು ನಾನು ಅವಕಾಶ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ಅನಾನುಕೂಲವಾಗದಂತೆ ಕೋಲಾರದ ಕೆರೆಗೆ ನೀರು ಹರಿಸುವುದಾದರೆ ನನ್ನದಾಗಲಿ, ನನ್ನ ಕ್ಷೇತ್ರದ ಜನರಿಂದಾಗಲಿ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದೆ.