ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮೈಸೂರು ನಗರ ಸಿದ್ಧಗೊಂಡಿದ್ದು, ಕೊನೆ ಕ್ಷಣದ  ಪೂರ್ವತಯಾರಿಗಳು ಭರದಿಂದ ಸಾಗಿವೆ. ಪ್ರಧಾನ ಮಂತ್ರಿಗಳ ಮೈಸೂರು ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ಹೊಣೆಗಾರಿಕೆ ನಿರ್ವಹಿಸುತ್ತಿರುವ ಬಿಜೆಪಿ ರಾಜ್ಯ ಪ್ರಧಾನ  ಕಾರ್ಯದರ್ಶಿ ಹಾಗೂ  ಮಹದೇವಪುರ ಶಾಸಕ, ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿಯವರು ಕೊನೆ ಕ್ಷಣದ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಕೇಂದ್ರ‌ ಮಾನವ ಸಂಪನ್ಮೂಲ‌ ಸಚಿವ ಮತ್ತು‌ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ‌ ಬಿಜೆಪಿ ಉಸ್ತುವಾರಿ‌ ಶ್ರೀ ಪ್ರಕಾಶ್‌ ಜಾವಡೇಕರ್‌ ಈಗಾಗಲೇ ಮೈಸೂರು ತಲುಪಿದ್ದಾರೆ. ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಶ್ರೀ ಲಿಂಬಾವಳಿ ಅವರು ಶ್ರೀ ಜಾವಡೇಕರ್ ಜೊತೆ ಚರ್ಚೆ ನಡೆಸಿದರು.
ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗುವಂತೆ ನೋಡಿಕೊಳ್ಳಲು ಸಂಬಂಧಪಟ್ಟವರಿಗೆ  ಶ್ರೀ ಅರವಿಂದ ಲಿಂಬಾವಳಿಯವರು  ಸಲಹೆ-ಸೂಚನೆಗಳನ್ನು ನೀಡಿದರು.  ಶ್ರೀ ನರೇಂದ್ರ ಮೋದಿ ಅವರು ಫೆ 19ರಂದು ಮೈಸೂರು ರೈಲು ನಿಲ್ದಾಣದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಹಾರಾಜ ಕಾಲೇಜು ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.