ಲೋಕಸಭಾ ಚುನಾವಣಾ ನಿಮಿತ್ತ ಬೆಳಗಾವಿಯಲ್ಲಿ ಬೃಹತ್ ರೋಡ್ ಶೋ ಮತ್ತು ಬೈಕ್ ರ‌್ಯಾಲಿ ನಡೆಸಲಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರು, ಪಕ್ಷದ ಅಭ್ಯರ್ಥಿಗಳು‌ ಆದ ಶ್ರೀ ಸುರೇಶ್ ಅಂಗಡಿ ಅವರು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, ಬೆಳಗಾವಿಯ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಬೆನಕೆ, ದಕ್ಷಿಣ ವಿಧಾ‌ನಸಭಾ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಸೇರಿದಂತೆ ಇತರೆ ಮುಖಂಡರು, ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಈ ವೇಳೆ ಭಾಗವಹಿಸಿದ್ದರು.