ಮಹದೇವಪುರ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ಸಾಕಷ್ಟು ಕಾಮಗಾರಿಗಳು ಈಗಾಗಲೇ ಮುಗಿದಿವೆ. ಬೆಂಗಳೂರಿನ ಅತ್ಯಂತ ಕ್ರಿಯಾಶೀಲ ಕ್ಷೇತ್ರಗಳಲ್ಲಿ ನಮ್ಮ ಕ್ಷೇತ್ರವೂ ಒಂದು. ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಕೈಗೊಂಡಿರುವ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

ಬೆಳ್ಳಂದೂರು ವಾರ್ಡ್ ನ ಕೈಕೊಂಡರ ಹಳ್ಳಿಯ ಎಚ್ ಎನ್ ಆರ್ ಬಡಾವಣೆಯ ಮುನೇಶ್ವರ ದೇವಸ್ಥಾನದ ಹತ್ತಿರ ಕಾಂಕ್ರಿಟ್ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ಕೆಲವೇ ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಲ್ಲಿನ ನಿವಾಸಿಗಳಿಗೆ ಸುಸಜ್ಜಿತ ರಸ್ತೆಯಲ್ಲಿ ಸಂಚರಿಸುವ ಭಾಗ್ಯ ದೊರೆಯಲಿದೆ.