ಇಬ್ಬರು ಪೌರ ಕಾರ್ಮಿಕರಾದ ಶ್ರೀ ರಾಮು ಮತ್ತು ಶ್ರೀ ರವಿಯವರು ಎಇಸಿಎಸ್‌ ಬಡಾವಣೆಯ ಸಮೀಪ ಇರುವ ಯಮ್‌ಲೋಕ್‌ ಹೊಟೆಲ್‌ನ ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛ ಮಾಡಲು ಇಳಿದು ಉಸಿರುಕಟ್ಟಿ ಮೃತರಾಗಿರುವುದು ದುರಂತದ ಸಂಗತಿ.
ಇಂದು ನಾನು ವೈದೇಹಿ ಆಸ್ಪತ್ರೆಗೆ ತೆರಳಿ, ಅಲ್ಲಿದ್ದ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಎರಡೂ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳ ಚೆಕ್‌ ನೀಡಿದೆನಲ್ಲದೆ, ಮೃತರ ಕುಟುಂಬದ ತಲಾ ಒಬ್ಬರಿಗೆ ಅವರ ಸ್ವಂತ ಊರಿನಲ್ಲಿ ಉದ್ಯೋಗ ಒದಗಿಸುವುದಾಗಿ ವಾಗ್ದಾನ ಮಾಡಿದೆ.