ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ ನಡೆಸಲಾಯಿತು. ಶಕ್ತಿಕೇಂದ್ರದ ಅಧೀನದಲ್ಲಿನ ಬೂತ್‌ಗಳನ್ನು ಸಶಕ್ತ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಕೇಂದ್ರ ಸರಕಾರದ ಜನಪರ ಆಡಳಿತವನ್ನು, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಶ್ರಮಿಸಬೇಕು ಎಂದು ತಿಳಿಸಿದೆ. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಶಕ್ತಿ ಕೇಂದ್ರದ ಪ್ರಮುಖರು ಇದ್ದರು.