ಐಟಿ ಉದ್ಯಮಗಳ ಕೇಂದ್ರಬಿಂದು ಆಗಿರುವ ಮಹದೇವಪುರ ಕ್ಷೇತ್ರವು ಪ್ರತಿವರ್ಷ 800 ಕೋಟಿ ರುಪಾಯಿ ತೆರಿಗೆ ಪಾವತಿಸುವ ಮೂಲಕ ದೇಶದಲ್ಲೇ ಮಾದರಿ ಕ್ಷೇತ್ರವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಹೀಗಾಗಿ ಐಟಿ ಹಬ್ ಆಗಿರುವ ಕ್ಷೇತ್ರವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೂಲಸೌಲಭ್ಯ ಕಲ್ಪಿಸಲು 704 ಕೋಟಿ ರುಪಾಯಿ ಅನುದಾನ ನೀಡಬೇಕೆಂದು ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರಿಗೆ ಈ ಮೂಲಕ ಮತ್ತೊಮ್ಮೆ ಕೋರಲಾಯಿತು.