ಸರ್ಜಾಪುರ ರಸ್ತೆಯಿಂದ ಬೆಳ್ಳಂದೂರು ಗೇಟ್‌ ವರೆಗಿನ ರಸ್ತೆ ಬದಿಯನ್ನು ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ನಡೆಸಲಾಯಿತು. ಈ ವೇಳೆ
-ಅರಳೂರು ಜಂಕ್ಷನ್‌ ನಲ್ಲಿ ಇಬ್ಬಲೂರು ಕಡೆಯಿಂದ ಬರುವರ ರಸ್ತೆಗೆ ಪ್ರಯೋಗಾತ್ಮಕವಾಗಿ ಬಲ ತಿರುವು ಹಾಗೂ ಸಿಗ್ನಲ್‌ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

– ಫೈರ್‌ ಸ್ಟೇಷನ್‌ ಜಂಕ್ಷನ್‌ ಹತ್ತಿರ ರಸ್ತೆ ಅಗಲೀಕರಣ ಮಾಡುವಂತೆ ಸೂಚಿಸಲಾಯಿತು. ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್‌ ಕಂಬಗಳನ್ನು ಸ್ಥಳಾಂತರ ಮಾಡಲು ಸೂಚಿಸಲಾಯಿತು. ಅಧಿಕಾರಿಗಳು ಅಂಡರ್‌ಗ್ರೌಂಡ್‌ ವಿದ್ಯುತ್‌ ಕೇಬಲ್‌ ಅನ್ನು ಅಳವಡಿಸುವುದಾಗಿ ತಿಳಿಸಿದರು.

-ಕೈಕೊಂಡನಹಳ್ಳಿ ಜಂಕ್ಷನ್‌ ಹತ್ತಿರ ಅಗಲೀಕರಣ ಮಾಡುವಂತೆ ಸೂಚಿಸಲಾಯಿತು. ಸಿಗ್ನಲ್‌ ನಲ್ಲಿ ಬಲ ತಿರುವು ನೀಡುವಂತೆ ಹಾಗೂ ಸಿಗ್ನಲ್‌ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿ ಸಿಗ್ನಲ್‌ ಅಳವಡಿಸಲು ದಾನಿಗಳಿಂದ ಕೊಡುಗೆಯಾಗಿ ಕೊಡಿಸುವುದಾಗಿ ತಿಳಿಸಲಾಯಿತು.

-ಪೂರ್ವ ಸನ್‌ಶೈನ್‌ ಅಪಾರ್ಟ್‌‌ಮೆಂಟ್‌ ಮುಂಭಾಗ ಸಣ್ಣ ನೀರಾವರಿ ಇಲಾಖೆಯವರು ಸಡೆಸುತ್ತಿರುವ ಕಾಮಗಾರಿಯನ್ನು 2 ದಿನಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡುವಂತೆ ಸಣ್ಣ ನೀರಾವರಿ ಇಲಾಖೆಗೆ ಅಧಿಕಾರಿಗಳಿಗೆ ಗಡುವು ನೀಡಲಾಯಿತು.

-ಜುನ್ನಸಂದ್ರ ಜಂಕ್ಷನ್‌ ಬಳಿ BWSSB ನಡೆಸುತ್ತಿರುವ ಪೈಪ್‌ ಲೈನ್‌ ಕಾಮಗಾರಿಯನ್ನು ಹತ್ತು ದಿನಗಳ ಒಳಗಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಗಡುವು ನೀಡಲಾಯಿತು.

-ಜುನ್ನಸಂದ್ರ ಬಸ್‌ ನಿಲ್ದಾಣದ ಹತ್ತಿರ ಪುಟ್‌ಪಾತ್‌ ಮೇಲೆ ಸುರಿದಿದ್ದ ಮಣ್ಣನ್ನು ತೆರವುಗೊಳಿಸುವಂತೆ ವಲಯ ಇಂಜಿನಿಯರ್‌ಗೆ ಸೂಚಿಸಲಾಯಿತು.