ಅರವಿಂದ ಲಿಂಬಾವಳಿಯವರ ಈ ಬಹುಮುಖ ವ್ಯಕ್ತಿತ್ವವನ್ನು ಸರಳವಾಗಿ ಬಣ್ಣಿಸುವುದಾದರೆ, ಅವರು ಮಹದೇವಪುರದ ನಾಗರಿಕರ ಪ್ರಿಯ ಪ್ರತಿನಿಧಿ ಮತ್ತು ಕರ್ನಾಟಕದ ಯುವ ನೇತಾರ.
ಸ್ನೇಹಕ್ಕೆ ಒದಗುವ ಮಿತ್ರ; ಜನರಿಗೆ ಎಟುಕುವ ಕಾರ್ಯಕರ್ತ. ನಸುನಗುವಿನ ಸ್ವಭಾವ; ಜೊತೆಗೇ ಖಡಕ್ ಮಾತುಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುವ ಜನನಾಯಕ.
ಸಮಾಜದ ಗಣ್ಯರ ಕಣ್ಣಲ್ಲಿ ದೇಶದ ಸಂಸ್ಕೃತಿ, ಹಿರಿಮೆ, ಗರಿಮೆ, ಪರಂಪರೆಯನ್ನು ಅತೀವವಾಗಿ ಗೌರವಿಸುವ ಅಪ್ಪಟ ದೇಶಾಭಿಮಾನಿ.
ಪಕ್ಷರಾಜಕಾರಣದ ಕಾರ್ಯಕರ್ತರಿಗೆ, ಅರವಿಂದ ಲಿಂಬಾವಳಿ ಒಬ್ಬ ಚತುರ ಸಂಘಟಕ.
ಕರ್ನಾಟಕದ ನೋವು ಬಲ್ಲ ಹೃದಯಗಳಿಗೆ ಅವರೊಬ್ಬ ಬರ-ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಹೃದಯವಂತ ಮುತ್ಸದ್ದಿ.