ಮಹದೇವಪುರ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಜೂನ್‌ 10 ರಂದು ನಡೆದ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದಂತೆ ವರ್ತೂರು ಮುಖ್ಯ ರಸ್ತೆ ಹಾಗೂ ಸೊರಹುಣಸೆ-ಮಧುರಾನಗರ ಮುಖ್ಯರಸ್ತೆ ಬದಿಯ ಫುಟ್‌ಪಾತ್‌ ನಲ್ಲಿರುವ ಅನಧಿಕೃತ ಗೂಡಂಗಡಿ ಮತ್ತು ಬೋರ್ಡ್ ಗಳನ್ನು ತೆರವುಗೊಳಿಸಲಾಯಿತು.